ವಾಣಿ(೧೯೧೨-೧೯೮೮) ಕನ್ನಡದ ಲೇಖಕಿ.ಮೈಸೂರು ನ ಶ್ರೀರಂಗಪಟ್ಟಣದಲ್ಲಿ ಜನಿಸಿದರು. ಇವರ ತಂದೆ ಪಿ.ನರಸಿಂಗ ರಾವ್ ಶ್ರೀರಂಗಪಟ್ಟಣದಲ್ಲಿ ವಕೀಲರಾಗಿದ್ದರು.ಮೂಲ ಹೆಸರು ಬಿ.ಎನ್.ಸುಬ್ಬಮ್ಮ . ಕಾವ್ಯನಾಮ -ವಾಣಿ. ವಾಣಿಯವರ ತಂದೆ ಮೈಸೂರು ಅರಮನೆಯ ನಾಲ್ವಡಿ ಕೃಷ್ನ ರಾಜ ಒಡೆಯರ್ ಅವರಿಂದ "ರಾಜಸೇವಾಸಕ್ತ" ಎಂಬ ಬಿರುದನ್ನು ಪಡೆದಿದ್ದರು. ವಾಣಿಯವರ ಪ್ರಸಿದ್ಧ ಕಾದಂಬರಿಗಳು -ಶುಭಮಂಗಳ, ಎರಡು ಕನಸು, ಹೊಸಬೆಳಕು - ಕನ್ನಡ ಚಲನಚಿತ್ರಗಳಾಗಿವೆ. == ಜೀವನ == ವಾಣಿಯವರು ಎಸ್.ಎಸ್.ಎಲ್.ಸಿ ಯವರೆಗೂ ಓದಿದ್ದರು. ಚಿಕ್ಕಂದಿನಿಂದಲೂ ಬರವಣಿಗೆಯಲ್ಲಿ ಆಸಕ್ತಿಯಿತ್ತು. ಹತ್ತನೆ ವಯಸ್ಸಿನಲ್ಲಿ ವಕೀಲರಾಗಿದ್ದ ಎಮ್.ಎನ್.ನಂಜುಂಡಯ್ಯನವರೊಡನೆ ಮದುವೆಯಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿದ ತ್ರಿವೇಣಿ, ಬಿ.ಎಮ್.ಶ್ರೀಕಂಠಯ್ಯ, ಆರ್ಯಾಂಬ ಪಟ್ಟಾಭಿ, ವಾಣಿಯವರ ಕುಟುಂಬ ಸದಸ್ಯರು ಆಗಿದ್ದರು. == ಕನ್ನಡ ಸಾಹಿತ್ಯಕ್ಕೆ ಕೊಡುಗೆ == ೧೯೪೪ ರಲ್ಲಿ ಕಸ್ತೂರಿಯಂಬ ಕಥಾ ಸಂಕಲನ ಬಿಡುಗಡೆಯಾಯಿತು. ಆದನಂತರ ವಾಣಿಯವರು ೩೩ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಪ್ರಪಂಚಕ್ಕೆ ನೀಡಿದ್ದಾರೆ. == ಕಾದಂಬರಿಗಳು == == ಪ್ರಶಸ್ತಿಗಳು == ೧೯೬೨- ಕರ್ನಾಟಕ ರಾಜ್ಯ ಪ್ರಶಸ್ತಿ ೧೯೭೨- ಕರ್ನಾಟಕ ಸಾಹಿತ್ಯ ಅಖಾಡೆಮಿ ಪ್ರಶಸ್ತಿ == ಉಲ್ಲೇಖಗಳು ==